ರುಮಟಾಯ್ಡ್ ಸಂಧಿವಾತ ಒಂದು ಸ್ವಯಂ ನಿರೋಧಕ ಕಾಯಿಲೆಯಾಗಿದ್ದು, ಇದರಲ್ಲಿ ದೇಹದ ಪ್ರತಿರಕ್ಷಣಾ ವ್ಯವಸ್ಥೆಯು ಕೀಲುಗಳನ್ನು ಒಳಗೊಂಡಂತೆ ಸ್ವಂತ ಅಂಗಾಂಶವನ್ನು ತಪ್ಪಾಗಿ ಆಕ್ರಮಣ ಮಾಡುತ್ತದೆ.
ಪ್ರತಿರಕ್ಷಣಾ ವ್ಯವಸ್ಥೆಯ (immunity) ಸಾಮಾನ್ಯ ಕಾರ್ಯವೆಂದರೆ ಬ್ಯಾಕ್ಟೀರಿಯಾ ಮತ್ತು ವೈರಸ್ಗಳಿಂದ ದೇಹವನ್ನು ರಕ್ಷಿಸುವುದು.
ಉರಿಯೂತವು ದೀರ್ಘಕಾಲದವರೆಗೆ ಮುಂದುವರಿದರೆ, ಇದು ಕಾರ್ಟಿಲೆಜ್ (ಕೀಲುಗಳ ತುದಿಗಳನ್ನು ಆವರಿಸುವ ರಕ್ಷಣಾತ್ಮಕ ಅಂಗಾಂಶ) ಮತ್ತು ಮೂಳೆಗಳನ್ನು ಹಾನಿಗೊಳಿಸುತ್ತದೆ. ಒಮ್ಮೆ ಸಂಭವಿಸಿದ ಹಾನಿಯನ್ನು ಸಾಮಾನ್ಯವಾಗಿ ಹಿಂತಿರುಗಿಸಲು ಸಾಧ್ಯವಿಲ್ಲ.ಕೀಲುಗಳನ್ನ ಹೊರತುಪಡಿಸಿ, ಸ೦ದಿವಾತ ಕಣ್ಣು, ನರ ಮಂಡಲ ಮತ್ತು ಶ್ವಾಸಕೋಶಗಳು, ಚರ್ಮದ ಮೇಲೆ ಪರಿಣಾಮ ಬೀರಬಹುದು.
ರೋಗಲಕ್ಷಣಗಳು
ಸಂಧಿವಾತ – ಸಾಮಾನ್ಯವಾಗಿ ಯವ್ವನದಲ್ಲಿ (೨೦-೪೦ ವಷ೯) ಹಾಗು ವೃದ್ಧಾಪ್ಯದಲ್ಲಿ(೫೦-೬೦ ವಷ೯) ಬರಬಹುದು, ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.
ರೋಗಲಕ್ಷಣಗಳು – ಪ್ರಾರಂಭದಲ್ಲಿ ಬೆರಳುಗಳ ಕೀಲಿನಲ್ಲಿ, ನಂತರ ಮೊಣಕೈ, ಭುಜ ಅಥವಾ ಮೊಣಕಾಲಿನಲ್ಲಿ ನೋವು ಅಥವಾ ಬಿಗಿತ ಕಾಣಿಸುತ್ತದೆ ತಾದನಂತರ ಕೀಲುಗಳ ಊತ ಕಾಣಿಸುತ್ತದೆ.
ಸಾಮಾನ್ಯವಾಗಿ ಒಂದು ಕೀಲಿನಲ್ಲಿ ಪ್ರಾರಂಭವಾಗಿ ನಂತರ ಇನ್ನೊಂದು ಕೀಲಿಗೆ ಆವರಿಸುತ್ತದೆ ಅಥವಾ ಒಂದು ಕೀಲುಗಳಲ್ಲಿ ಕಾಣಿಸಿಕೊಂಡು ಉಪಶಮನಾವದನಂತರ ಇನ್ನೊಂದು ಕೀಲಿನಲ್ಲಿ ಕಾಣಿಸಿಕೊಲ್ಲುತ್ತದೆ (ಇದನ್ನು ಪಾಲಿಂಡ್ರೋಮಿಕ್ ರುಮಾಟಿಸಮ್
ಅನ್ನುತ್ತಾರೆ).
ರೋಗದ ತೀವ್ರತೆ ಹೆಚ್ಚಾದಲ್ಲಿ ಆಯಾಸ, ಜ್ವರ ಕಾಣಿಸಿಕೊಳ್ಳುತ್ತದೆ, ತೂಕ ಹಾಗು ಹಸಿವು ಕೂಡ ಕಡಿಮೆಯಾಗಾಬಹುದು.
ದೀರ್ಘಕಾಲದ ಸಂದರ್ಭಗಳಲ್ಲಿ ಚರ್ಮದ ದದ್ದುಗಳು, ಬಾಯಿ ಮತ್ತು ಕಣ್ಣುಗಳ ತೇವಂಶ ಕಡಿಮೆಯಾಗಿ ಬಾಯಿ ಉಣಗುವುದು ಹಾಗು ಕಣ್ಣುಗಳು ಉರಿಯುತ್ತದೆ. ಶ್ವಾಶಕೋಶಕ್ಕೆ ಹರಡಿದರೆ ಕೆಮ್ಮು ,ನಿರಸ ಅಥವಾ ಊಬ್ಬಸ ಕಾಣಿಸಬಹುದು.
ರೋಗನಿರ್ಣಯ – ನಿಮ್ಮ ಪ್ರಾಥಮಿಕ ಆರೈಕೆ ವೈದ್ಯರು ನಿಮಗೆ ಸಂಧಿವಾತವಿದೆ ಎಂದು ಅನುಮಾನಿಸಿದರೆ, ಅವರು ಸಂಧಿವಾತಶಾಸ್ತ್ರಜ್ಞರನ್ನು ಬೇಟಿ ಮಾಡಲು ಸಲಹೆ ನಿಡುತ್ತಾರೆ. ರೋಗಲಕ್ಷಣಗಳು, ದೈಹಿಕ ಪರೀಕ್ಷೆ ಮತ್ತು ರಕ್ತ ಪರೀಕ್ಷೆಗಳು ಜೋತೆಗೆ ಕ್ಷ- ಕಿರಣ ಅಥವಾ ಅಲ್ಟ್ರಾಸೌಂಡ್, ರೋಗ ಪತ್ತೆ ಹಚ್ಚುದರಲ್ಲಿ ಸಹಾಯ ಮಾಡುತ್ತದೆ.
ಚಿಕಿತ್ಸೆಯ ಗುರಿ
ಕೀಲಿನ ಉರಿಯೂತವನ್ನು ನಿಯಂತ್ರಿಸಲು (ನೋವು, ಊತ)
ಕೀಲುಗಳ ಕಾರ್ಯವನ್ನು ಸಂರಕ್ಷಿಸಲು ಮತ್ತು ಹಾನಿಯನ್ನು ತಡೆಯಲು
ದೇಹದ ಮೇಲೆ ಸಂಧಿವಾತದ ಪರಿಣಾಮವನ್ನು ತಡೆಯಲು
ಪ್ರಾರಂಭದಲ್ಲಿ ನೋವು ನಿವಾರಕವನ್ನ ನಿಡಲಾಗುತ್ತದೆ.ರೋಗಲಕ್ಷಣದ ತೀವ್ರತೆಯನ್ನು ಅವಲಂಬಿಸಿ ಸ್ಟೀರಾಯ್ಡ್ಗನ್ನು ಅಲ್ಪಾವಧಿಗೆ ಕೊಡಲಾಗುತ್ತದೆ.
ಔಷಧಗಳು–ಮೆಥೊಟ್ರೆಕ್ಸೇಟ್,ಲೆಫ್ಲುನೊಮೈಡ್,ಸಲ್ಫಾ–ಸಲಾಜಿನ್, ಟೊಫಾಸಿಟಿನಿಬ್ನಂತಹ ಇಮ್ಯುನೊಮಾಡ್ಯುಲೇಟರ್ಗಳನ್ನು ವಯಸ್ಸು, ರೋಗದ ತೀವ್ರತೆ, ರೋಗದ ಅವಧಿ ಮತ್ತು ಇತರ ಅಂಶಗಳನ್ನು ಪರಿಗಣಿಸಲು ಪ್ರಾರಂಭಿಸಲಾಗುತ್ತದೆ.
ಪ್ರತಿಯೊಂದು ಔಷಧಿಯು ತನ್ನದೇ ಆದ ಅಡ್ಡ ಪರಿಣಾಮಗಳನ್ನು ಹೊಂದಿದೆ, ಇದು ಔಷಧಿಗಳನ್ನು ಪ್ರಾರಂಭಿಸುವ ಮೊದಲು ತಿಳಿಸಲಾಗುತ್ತದೆ.
ಅನುಸರಣೆ – ಔಷಧಿಗಳನ್ನು ಪ್ರಾರಂಭಿಸಿದ ನಂತರ ರೋಗಿಯು ರಕ್ತ ಪರೀಕ್ಷೆಗಳೊಂದಿಗೆ 2-3 ತಿಂಗಳ ಮಧ್ಯಂತರದಲ್ಲಿ, ರೋಗದ ಸ್ಥಿತಿ ಮತ್ತು ಔಷಧಗಳ ಅಡ್ಡ ಪರಿಣಾಮಗಳನ್ನು ನಿರ್ಣಯಿಸಲು ನಿಯಮಿತವಾಗಿ ವೈದ್ಯರನ್ನು ಭೇಟಿಯಾಗಬೇಕು.
ದೇಹದ ತೂಕವನ್ನು ಕಾಪಾಡಿಕೊಳ್ಳಲು ನಿಯಮಿತ ವ್ಯಾಯಾಮಗಳು ಮತ್ತು ಕೀಲುಗಳ ಚಲನಶೀಲತೆಯನ್ನು ಕಾಪಾಡಿಕೊಳ್ಳಲು ಕೀಲುಗಳ ಸಡಿಲಿಸುವ ವ್ಯಾಯಾಮಗಳನ್ನು ಮಾಡುವ ಅಗತ್ಯವಿರುತ್ತದೆ.
ರೋಗದ ಉಲ್ಬಣದ ಸಮಯದಲ್ಲಿ ವ್ಯಾಯಾಮವನ್ನು ತಪ್ಪಿಸಿ.
ಆಹಾರ – ಸಂಧಿವಾತಕ್ಕೆ ಯಾವುದೇ ನಿರ್ದಿಷ್ಟ ಪತ್ಯವಿಲ್ಲ ಆದರೆ ಸಾಮಾನ್ಯ ಸಮೃದ್ಧವಾದ ಆರೋಗ್ಯಕರ ಆಹಾರ – ಹಸಿರು ಎಲೆಗಳ ತರಕಾರಿಗಳು, ಹಣ್ಣುಗಳು ನಾರಿನಂಶ ಹೆಚ್ಚುರುವ ಪದಾರ್ದಗಳು, ಹಾಲು ಮತ್ತು ಮೊಸರು ಸೇವಿಸುವುದು ಉತ್ತಮ.
ನಿಷೇದಿಸಬೇಕದ ಆಹಾರಗಳು- ಮಾಂಸಹಾರ ಮೀನನ್ನು ಹೊರತುಪಡಿಸಿ,ಆಲುಗೆಡ್ಡೆ, ಮೊಳಕೆಯೊಡದ ಕಾಳುಗಳು,ಅವರೆಕಾಳು,ಬದನೆಕಾಯಿ ಮತ್ತು ಪನ್ನಿರು.
ಹೆಚ್ಚಿನ ಮಾಹಿತಿಗಾಗಿ ಮೇಲಿನ ಕ್ಯೂರ್ ಕೊಡ್ ನ್ನು ಸ್ಕ್ಯಾನ್ ಮಾಡಿ.
ಮಾಹಿತಿದಾರರು
ಡಾ ಪ್ರವೀಣ್ ಕುಮಾರ್.ಎಂ
ಸಂದಿವಾತ ಸಲಹೆಗಾರರು
ದೈವಿಕ್ ರುಮಾಟಲಾಜಿ ಮತ್ತು ಸಂದಿವಾತ ಸೆಂಟರ್
We’re just a message away—reach out for more information!